ಮುಕ್ಕೊಡೆ ಮತ್ತು ಶಂಖ
ಮುಕ್ಕೊಡೆಶಂಖ ಗಡಿಗಲ್ಲು ಇದೆ. ವಿಶೇಷ ಎಂದರೆ ಮುಕ್ಕೊಡೆ ಜಿನನ್ನು ಪ್ರತಿನಿಧಿಸಿದರೆ. ಶಂಖ ನೇಮಿನಾಥ ತೀರ್ಥಂಕರರನ್ನು ನೆನಪಿಸುತ್ತದೆ. ಶಂಖ ನೇಮಿನಾಥ ತೀರ್ಥಂಕರ ಲಾಂಛನ. ಸೂರ್ಯ, ಚಂದ್ರ, ಮುಕ್ಕೊಡೆ ಅದರ ಇಕ್ಕೆಲಗಳಲ್ಲಿ ಚಾಮರಗಳು ಅದರ ಕೆಳಗೆ ಶಂಖ ಇವಿಷ್ಟೂ ಗೀರುಶಿಲ್ಪಗಳು ಈ ಗಡಿಗಲ್ಲಿನಲ್ಲಿವೆ. ಇದೊಂದು ದಾನ ಕೊಟ್ಟ ಭೂಮಿಯ ಗುರುತಾಗಿದ್ದು, ಬಸದಿಗೆ ಭೂದಾನ ಸಂದಿದೆ. ಬಸದಿಯ ಇರುವಿಕೆ ನನ್ನ ಗಮನಕ್ಕೆ ಬಂದಿಲ್ಲ. ಶಂಖ ಲಾಂಛನದಿಂದ ಈ ಬಸದಿಯು ನೇಮಿನಾಥ ತೀರ್ಥಂಕರರದ್ದಾಗಿತ್ತು.