Menu Close

ಅಕ್ಕರಮೇರು ಶಾಸನ

ಜೈನರು ಅಕ್ಷರಗಳನ್ನು ಆ ಧರ್ಮದ ಸಿದ್ಧ ಭಗವಾನರಿಗೆ ಹೋಲಿಸುತ್ತಾರೆ.ಆದ್ದರಿಂದಲೇ ಅಕ್ಷರಗಳಿಗೆ ಧವಳ ವರ್ಣವನ್ನು ನಿರೂಪಿಸಲಾಗಿದೆ. ೧೨ ನೆಯ ಶತಮಾನದಲ್ಲಿ ಬದುಕಿದ್ದ ಪ್ರಸಿದ್ಧ ಜೈನ ವೈಯಾಕರಣಿ ಕೇಶಿರಾಜನಂತೂ ತನ್ನ ಕೃತಿಯಲ್ಲಿ ಅಕ್ಷರಗಳನ್ನು ಅಕ್ಕರುಮುಂ ವರ್ಣಮುಮೆಂದಕ್ಕುಂ ಶುದ್ಧಾಕ್ಷರಕ್ಕೆ ನಾಮಂ ಬರೆಪಂಬೊಕ್ಕುಚ್ಚರಿಲ್ಬಾರದುವಕ್ಕರಮಲ್ತವು ಘನಸ್ವಾನಾದಿ ಧ್ವನಿಗಳ್. ಎಂದಿದ್ದಾನೆ.ಅಂದರೆ ಅಕ್ಷರಗಳು ಕೇವಲ ಅಕ್ಷರಗಳಲ್ಲ ಅವು ಶುದ್ದಗೆಗಳಾಗಿದ್ದು, ತೀರ್ಥಂಕರರಷ್ಟೆ ಪರಿಶುದ್ಧವಾದವುಗಳು ಎಂಬ ಭಾವ ಜೈನರಲ್ಲಿದೆ. ಆದ್ದರಿಂದಲೆ ಇವರು ಅಕ್ಷರಪೂಜಾ;ಪದ್ಧತಿಯನ್ನು ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬಂದಿರುತ್ತಾರೆ.ಅಕ್ಷರಗಳನ್ನು ಅರಹಂತನಿಗೆ ಅರ್ಪಿಸಿದನ್ನು ಪ್ರಸ್ತುತ ಕೆಳಗೆ ಉಲ್ಲೇಖಿಸಿದ ಲಿಪಿವಿನ್ಯಾಸದ;ಅಣ್ಣಿಗೆರೆ ಪಾರ್ಶ್ವನಾಥ ಬಸದಿಯಲ್ಲಿರುವ ಹಿತ್ತಾಳೆ ಶಾಸನದಲ್ಲಿ ಕಾಣಬಹುದು. ಆದಿಕವಿ;ಪಂಪನ ವಂಶಸ್ಥರಾದ ಅಣ್ಣಿಗೆರೆ ದೇಶಪಾಂಡೆ ವಾಡೆಯ ಅಧಿಕಾರಿಗಳು ಈ ಅಕ್ಷರಮೇರು;ಶಾಸನವನ್ನು ಬರೆಸಿಕೊಟ್ಟು, ನಿತ್ಯ ಪೂಜೆಗೈಯಾಗಲೆಂದು ಬಸದಿಗೆ ಸಲ್ಲಿಸಿದ್ದಾರೆ. However, the dose must be adjusted is ivermectin for humans over the counter as the pregnancy progresses. Aciclovir tablets 800 mg has been used as an antiviral medication for herpes virus infection neurontin reviews for nerve pain caused by herpes simplex virus. Generic zovirax is also on other brands of zovirax that ziverdo kit price snappishly is not manufactured by teva pharmaceutical industries ltd., canada. Amoxicillin is a synthetic antibiotic cost of gabapentin without insurance Ipu drug that is used for the treatment of bacterial infections. I’ve seen many patients who can take care of themselves priligy nedir ne işe yarar someways and don’t see a need to call for a refill. ಇದಕ್ಕೆ ಸಿದ್ಧಚಕ್ರ ಎಂತಲೂ ಅನ್ನುತ್ತಾರೆ. ಅಕ್ಷರ ಅಭ್ಯಾಸ ದ ಸಮಯದಲ್ಲಿ, ಸಕಲ ಇಷ್ಟಾರ್ಥಗಳು ನೆರವೇರಲು ಈ ರೀತಿಯ ಶಾಸನವನ್ನು ಬರೆಸುವ ಪದ್ಧತಿ ಬಹುಹಿಂದಿನಿಂದಲೂ ಇದೆ. ಬಹಳಷ್ಟು ಬಸದಿಗಳಲ್ಲಿ ಇವು ಕಾಣಸಿಗುತ್ತವೆ. ಶ್ರವಣಬೆಳಗೊಳದ ಗೊಮ್ಮಟನ ಪಾದದ ಬಳಿ ದೇವನಾಗರಿ ಲಿಪಿಯ ಇಂತದ್ದೆ ತಾಮ್ರಶಾಸನವಿದೆ.

ಪ್ರಸ್ತುತ ಶಾಸನದಲ್ಲಿ ಕನ್ನಡ ವರ್ಣಮಾಲೆ ರಚನೆಯಾಗಿದ್ದು, ಕೆಲವೊಂದು ಅಕ್ಷರಗಳು ವಿಶೇಷವೆನಿಸುತ್ತವೆ. ಇರಲ್ಲಿರುವ ವರ್ಣಗಳು ಹೀಗಿವೆ

ಸ್ವರಗಳು

ಅ ಆ ಇ ಈ ಉ ಊ ಋ ೠ ಲೃ ಲೄ ಎ ಐ ಒ ಔ

ವರ್ಗೀಯ ವ್ಯಂಜನಗಳು

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ

ಅವರ್ಗೀಯ ವ್ಯಂಜನಗಳು

ಯ ರ ಲ ವ ಶ ಷ ಸ ಹ

ಅನುಸ್ವರಗಳು

ಅಂ ಅಃ

ಒಟ್ಟು ಅಕ್ಷರಗಳು ೪೯

ಇಲ್ಲಿ ಏ ಓ ಮತ್ತು ಳ ಅಕ್ಷರಗಳಿಲ್ಲ.
ಹಿಂದೆ ಬಳಕೆಯಲ್ಲಿದ್ದ ಲೃ ಲೄ ಅಕ್ಷರಗಳು ಬಳಕೆಯಲ್ಲಿವೆ.(ಅವುಗಳ ಚಾಕ್ಷುಕ ಬಳಕೆ ಕೆಳಗಿನ ಲಿಪಿವಿನ್ಯಾಸದಲ್ಲಿ ಕಾಣಬಹುದು)
ೠ ಕಾರ ಬಳಕೆಯಾಗಿದೆ.
ಲೃ ಲೄ ಮತ್ತು ೠ ಗಳನ್ನು ಕಳೆದು ಏ ಓ ಳ ಕಾರಗಳನ್ನು ಸೇರಿಸಿದರೆ ಸದ್ಯ ನಾವು ಬಳಸುವ ವರ್ಣಮಾಲೆ ತಯಾರಾಗುತ್ತದೆ. ಪ್ರಸ್ತುತ ಶಾಸನ ಲಿಪಿ ದೃಷ್ಟಿಯಿಂದ ೧೭- ೧೮ ನೆಯ ಶತಮಾನದ ರಚನೆ ಎನ್ನಲಡ್ಡಿಯಿಲ್ಲ.